Monday, 21 January 2013

ಕನಸುಗಳು ಅತೃಪ್ತರ ಸ್ವತ್ತು.


     ಅನಿಸಿದ್ದು ಹೇಳಬೇಕೆಂದರೆ ಒಂದೇ ಸಾಲಿನಲ್ಲಿ ಇತಿಹಾಸವನ್ನು ಬರೆಯುವಂತಿರಬೇಕು.ಹಿಂದಿನರಾಜಾರಾಣಿಯರ,ಮೆರೆದ ಸರ್ವಾಧಿಕಾರಿಗಳ,ಬದುಕಿನ ಬಗ್ಗೆ ಮಾತನಾಡಿದ ಮೇದಾವಿಗಳ,ಬೀದಿಬದಿಯಲ್ಲಿ ಚಿನ್ನವಜ್ರ ಮಾರುತ್ತಿದ್ದವರ, ಊ ಕೊಳ್ಳೆ ಹೊಡೆದವರ ಬಗ್ಗೆ ಮಾತನಾಡಲೇಬಾರದು.
    ಇತಿಹಾಸ ನನ್ನ ಹುಟ್ಟಿನಿಂದ ಶುರುವಾಗುತ್ತದೆ.ನಾನು ತುಂಬಾಅಳುತ್ತಿದ್ದೆ.ಅದನ್ನು ನೋಡಿ ದಾದಿ ತುಂಬಾ ಚುರುಕಾಗುತ್ತಾನೆಅಂದಳು.ಅಮ್ಮನ ಮೊಲೆಗೆ ಆತುಗೊಂಡು ಸಮ್ರದ್ದಿಯಾದ ತನುವುನಿದ್ದೆಗೆ ಜಾರುತ್ತದೆ.ನಿದ್ದೆಯಲ್ಲಿ ಅಣ್ಣಗೆ ನಕ್ಕದ್ದನ್ನು ಅಮ್ಮನೋಡಿದ್ದಾಳೆ.ನಾ ಕಂಡ ಕನಸುಗಳಿಗೆ ಅವಳು ರೂಪಕೊಡುತ್ತಾಳೆ.ನನ್ನ ಪ್ರಕಾರ ಆ ನನಗೆ ಕನಸು ಬೀಳಲು ಸಾದ್ಯವೇ ಇಲ್ಲ.ಕನಸುಗಳು ಅತೃಪ್ತರ ಸ್ವತ್ತುಆಗತೃಪ್ತಿಯ ಮೊತ್ತವಾಗಿದ್ದ ನನಗೆ ಕನಸು ಬಿದ್ದಿರಲಿಕ್ಕಿಲ್ಲ.ಹಾಗಾದರೆ ನಕ್ಕಿದ್ದು ಯಾಕೆಂದು ಕೇಳಬೇಡಿ.ನನ್ನಇತಿಹಾಸದಲ್ಲಿ ವಿವರಣೆಗಳಿಲ್ಲ.
ನಾನು ಆಡಿ ಬೆಳೆದು ದೊಡ್ಡವನಾದೆ.ಅದರಲ್ಲಿ ಹಣ್ಣುಗಳನ್ನು ಕದ್ದು ಕೊಯ್ದು ತಿಂದದ್ದು,ಗೋಲಿ ಆಟದಲ್ಲಿಅಮೂಲ್ಯವಾದ ಬಿಳಿಗೋಲಿಯನ್ನು ಕಳೆದುಕೊಂಡದ್ದು,ಸೈಕಲನ್ನು ಕಲಿಯಲು ಯಾರೂ ಸೈಕಲ್ಲನ್ನೇ ಕೊಡದೇಹೋದದ್ದು,ಅದೆಷ್ಟೆ ಪ್ರಯತ್ನ ಮಾಡಿದರೂ ಹತ್ತನೇ ತರಗತಿಯಲ್ಲಿ ಕೇವಲ ನಾನೂರೇ ಅಂಕ ತೆಗೆಯಲುಸಾದ್ಯವಾಗಿದ್ದು ಇವೆಲ್ಲಾ ಇತಿಹಾಸವಾಗಬಾರದು.ಇತಿಹಾಸವೆಂದರೆ ನಾನು ದೊಡ್ಡವನಾಗಿದ್ದಷ್ಟೇ!
     ಇತಿಹಾಸದಲ್ಲಿ ಅವಳನ್ನು ಮನಸ್ಸಿನಲ್ಲೇ ಆರಾದಿಸಿದ್ದು,ಒಂದೇ ಒಂದು ಸಾರಿ ನನ್ನನ್ನು ನೋಡಿ ನಕ್ಕಾಗನಾನು ಖಾಯಿಲೆ ಬಿದ್ದಂತಾಗಿದ್ದು,ಅವಳು ನಕ್ಕು ಇಂದು ವಾರಕ್ಕೇ ಅವನೊಂದಿಗೆ ಮದುವೆಯಾದ ಸುದ್ದಿ ಬಂದುಎಲ್ಲವನ್ನು ಕಳೆದುಕೊಂಡಂತೆ ಎಲ್ಲರ ಅನುಕಂಪಕ್ಕಾಗಿ ಹಪಹಪಿಸಿದ್ದು ಯಾವುದೂ ಇರಬಾರದು.ಅವಳ ನವಿರಾದಬೆವರ ವಾಸನೆಯಲ್ಲಿ ಇತಿಹಾಸ ಮುಳುಗಬಾರದು.
     ಕೆಲಸ  ಸಿಗಲಿಲ್ಲ ಅಂತಾ ಮನೆಯಲ್ಲೇ ಕುಳಿತವನಿಗೆ ಮನದಲ್ಲೊಂದು ಹುಣ್ಣಾಗಿ ಅದನ್ನುಕೆರೆದುಕೊಳ್ಳುತ್ತಲೇ ಅಪ್ಪನ ಎದುರಿಗೆ ಆಸ್ತಿಯಲ್ಲಿ ಪಾಲು ಕೇಳಿದ್ದು,ಪಾಲು ಕೇಳಿದ್ದೇ ನೆಪ ಮಾಡಿಕೊಂಡುಮದುವೆ ಮಾಡಿದ್ದು,ಹೆಂಡತಿಯಾಗಿ ಬಂದವಳು ನನಗೂ ಕನಸುಗಳಿವೆ ಅಂದದ್ದು,ಅವಳ ಕನಸುಗಳನ್ನು ಹಾಗೇಪೋಷಿಸುತ್ತಾ ಅವಳ ನೆಕ್ಲೇಸನ್ನು ಅಡವಿಟ್ಟಿದ್ದು,ಅವಳು ಸಿಡುಕಿ ತವರಿಗೆ ಹೋದದ್ದು,ಆಸ್ತಿಯಲ್ಲಿ ಬಂದ ಪಾಲನ್ನುಅಡವಿಟ್ಟು ಅವಳನ್ನು ಕರೆತಂದು ಮಕ್ಕಳು ಮಾಡಿದ್ದು,ಅವೂ ಕೂಡ ಅಳುತ್ತಲೇ ಹುಟ್ಟಿದ್ದು,ದಾದಿಯೊಬ್ಬಳುಚುರುಕಾಗುತ್ತವೆ ಅಂದದ್ದು,ಒಂದು ಕಾಲದಲ್ಲಿ ನನ್ನದೇ ಆದ ಡೆಪಾಸಿಟ್ನಲ್ಲಿದ್ದ ನನ್ನ ಹೆಂಡತಿಯ ಮೊಲೆಗಳಿಗೆಮಕ್ಕಳು ಬಾಯಿ ಹಾಕಿದ್ದು,ಹಾಗೇ ನಿದ್ದೆ ಮಾಡಿದ ಬಳಿಕ ನಾ ನೋಡಿದಾಗ ಅವು ನಕ್ಕಿದ್ದು,ನಾನು ಅವುಗಳಿಗೆರೂಪ ಕೊಡತೊಡಗಿದ್ದು ಇತಿಹಾಸವಾಗಬಾರದು.
ಇತಿಹಾಸವೆಂಬುದು ಒಂದೇ ಒಂದು ಸಾಲಿನಲ್ಲಿರಬೇಕು......ಹೇಗೇಂದರೆ
   ಇನ್ನು ಸಾದ್ಯವೇ ಇಲ್ಲ ಎಂದು ನಿವೇದಿಸಿಕೊಂಡ ಪ್ರೀತಿಯಂತೆ....!
ಲೇಖಕರು:- ಚಲಂ

No comments:

Post a Comment