ಹನಿ ಹನಿಗಳು.......
ಆ-ರಾಧನೆ
ಪ್ರಿಯೆ
ತಪ್ಪು ನಂದಲ್ಲ
ಕಡಿಮೆಯಾದುದಕ್ಕೆ ನಿನಗೆ
ನನ್ನ ಆರಾಧನೆ!
ಇದಕ್ಕೆಲ್ಲ ಕಾರಣ
ಪಕ್ಕದ ಮನೆ
ಆ ರಾಧನೆ.
ಪ್ರತಿಫಲ
ಹುಡುಗಿಯರ ಗಲ್ಲ
ಎಂದರೆ ತಿಳಿದಿದ್ದ
ಅಪ್ಪಟ ಸಿಹಿ ಬೆಲ್ಲ!
ತಿನ್ನಲು ಹೋಗಿ
ಕಳ್ಳೊಂಡಿದ್ದ
ಹದಿನಾರು ಹಲ್ಲ!!
ಹಲ್ಲು
ನನ್ನ ನೋಡಿ
ನೀ ಬಿಟ್ಟ
ಹೊಳಪು ಹಲ್ಲು!
ಜೀವನದಲ್ಲಿ ಎಡವಿ ಬೀಳಲು
ಕಾರಣವಾದ ಮೈಲುಗಲ್ಲು!!
 |
| -ಚಿನ್ನೇನಹಳ್ಳಿ ಸ್ವಾಮಿ |
No comments:
Post a Comment