Tuesday, 22 January 2013

ತಮಟೆಗಿನ್ನು ಸುಖ.....


 ಶ್
ನಾನು ಮಾತನಾಡುತ್ತಿದ್ದೇನೆ
ಸ್ವಲ್ಪ ಕೇಳಿಸಿಕೊಳ್ಳಿ
ಅದಷ್ಟೋ ಸತ್ತ ಹೆಣಗಳ ಮುಂದೆ
ಎದೆ ಉಬ್ಬಿಸಿ ನಡೆಯುತ್ತಿದ್ದೇನೆ

ನನ್ನೂರಿನ,ಪಕ್ಕದೂರಿನ
ಸಾವು,ಮದ್ವೆ,ಸೀಮಂತಕ್ಕೂ ನಾನೇ ಮುಂದು
ಛಟ್..ಛಟ್..ಎಂದು
ನಾನು ಹೊಡೆಸಿಕೊಳ್ಳುತ್ತಿದ್ದೆ
ನನ್ನ ಜನ ಹುಚ್ಚೆದ್ದು ಕುಣಿಯುತ್ತಿದ್ದರು
ಗೌಡರು,ಲಿಂಗಾಯಿತರು,
ಬ್ರಾಹ್ಮಣರ ಪೂಜೆಗೂ ನನ್ನದೇ ನಾದ ಬೇಕಿತ್ತು
ನನ್ನ ಸದ್ದೇ ಅಂತದ್ದು.
ಹತ್ತಾರೂ ಕೇರಿಗೆ ಕೇಳಿಸುತ್ತಿತ್ತು.
ಸುಖ ಎನಿಸುತ್ತಿದೆ
ಇನ್ನೂ ಇನ್ನೂ ಜೋರಾಗಿ ಹೊಡೆಯಿರಿ
ಎನ್ನುತ್ತಿದೆ.
ಹುರುಪು ಮಾಡಿಕೊಂಡು ಮೈ ಒಡ್ಡುತ್ತಿದ್ದೆ.
                                   -ನಾಗರಾಜ್ ಹೆತ್ತೂರು

No comments:

Post a Comment