27-01-2013ರಂದು ಹಾಸನದ ಹಾಡ್ಲಹಳ್ಳಿ
ಪಬ್ಲಿಕೇಷನ್ಸ್
ನಲ್ಲಿ
ನಡೆದ
"ಯುವಸಮುದಾಯದಲ್ಲಿ
ಸಾಹಿತ್ಯಿಕ
ಅಭಿರುಚಿ"ಎಂಬ ಗೋಷ್ಠಿಯಲ್ಲಿ
ಹಿರಿಯ
ಲೇಖಕಿ
ಬಾನುಮುಷ್ತಾಕ್
ರವರು
ಮಾಡಿದ
ಮಾತುಕತೆಯ
ಸಂಗ್ರಹರೂಪ.
ಗುಲಾಬಿ
ವರ್ಣನೆ
ಹಾಗು
ದೆಲ್ಲಿ
ರೇಪ್
ಮೌನದ ರಾಜಕಾರಣ
ಅಪಾಯಕಾರಿ.ಯಾವ ಕಡೆಯೂ ನಿಲ್ಲದೇ
ಇರುವುದು
ಕೂಡ
ಒಂದು
ಕಡೆ
ನಿಲ್ಲುವುದೇ
ಆಗಿರುತ್ತದೆ.ಸಾಹಿತಿಯಾದವನುಮೌನದ
ಚಿಪ್ಪಿನಿಂದ
ಹೊರಬರಬೇಕು..ಆತನ ಮೌನ ಹಲವು ಅಪಾಯಗಳಿಗೆ
ಎಡೆ
ಮಾಡಿಕೊಡುತ್ತದೆ.ಮೌನವೆಂಬುದು
ನಿಜಕ್ಕೂ
ಅಪಾಯಕಾರಿ.
ಒಂದು ಕಾಡಿನಲ್ಲಿ ಸುಂದರವಾದ ಜಿಂಕೆಯಿದೆ.ಅದನ್ನು ಬೇಟೆಯಾಡಲು
ರಾಜ
ರಥದಲ್ಲಿದ್ದಾನೆ,ರಥದ ಹಿಂದೆ ಭಟರು ಓಡಿಬರುತ್ತಿದ್ದಾರೆ.ಈ ರೂಪಕದಲ್ಲಿ
ಬರಹಗಾರನಾದವನು
ಎಲ್ಲಿ ಗುರುತಿಸಿಕೊಳ್ಳುತ್ತಾನೆ ಎಂಬುದು ಮುಖ್ಯ.ಜಿಂಕೆಯ ಜತೆ ಗುರುತಿಸಿಕೊಳ್ಳಬಹುದು.ರಥದ ಹಿಂದೆ ಓಡಿಬರುತ್ತಿರುವ
ಹಿಂಬಾಲಕರ
ಜತೆ
ಗುರುತಿಸಿಕೊಳ್ಲಬಹುದು..ಬೇಟೆಯಲ್ಲಿ
ನಿರತನಾಗಿರುವ
ರಾಜನ
ಜತೆ
ಗುರುತಿಸಿಕೊಂಡು
ಬಾಣದ
ಜತೆ
ಮಾತನಾಡಬಹುದು.ಇಲ್ಲಿ ವಿದ್ವಂಸಕತೆಯಿದೆ,ಸೌಂದರ್ಯದ
ಪ್ರತೀಕವಾಗಿ
ಜಿಂಕೆಯಿದೆ,ಹೊಗಳುಭಟ್ಟರಾಗಿ
ಹಿಂಬಾಲಕರಿದ್ದಾರೆ,ನಮ್ಮ ಬರವಣಿಗೆಯ
ಮೂಲವನ್ನು
ಇದರಲ್ಲಿ
ಗುರುತಿಸಬಹುದು.
ಸಾಹಿತಿಯಾದವನು ಮಾತನಾಡುವುದಷ್ಟೇ ಅಲ್ಲ,ಏನು ಮಾತನಾಡುತ್ತಾನೆ
ಎಂಬುದು
ಮುಖ್ಯವಾದ
ವಿಚಾರ.ದೆಹಲಿಯಲ್ಲಿ
ಗ್ಯಾಂಗ್
ರೇಪ್
ನಡೆಯುತ್ತಿರುವಾಗ
ಗುಲಾಬಿಯನ್ನು
ವರ್ಣಿಸುತ್ತಾ
ಕೂರುವುದು
ಸರಿಯಾದ
ಲಕ್ಷಣವಲ್ಲ.ಈ ನಿಟ್ಟಿನಲ್ಲಿ
ಸಾಹಿತಿಗೆ
ಸಾಮಾಜಿಕ
ಜವಬ್ದಾರಿಯಿದೆ.
ವಿಮರ್ಶಕರು ಹೇಳಿದ್ದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು.ವಿಮರ್ಶಕರು
ನಮ್ಮನ್ನು
ಅವಲಂಬಿಸಿದವರು.ನಾವು ಬರೆದರೆ ಮಾತ್ರ ಅವರು ವಿಮರ್ಶಿಸುತ್ತಾರೆ.ನಮ್ಮ ಕೃತಿಗೆ ಓದುಗನೇ ನೇರ ವಿಮರ್ಶಕ.ಹೀಗಾಗಿ ವಿಮರ್ಶಕರನ್ನು
ಗಂಭೀರವಾಗಿ
ಪರಿಗಣಿಸುವ
ಅವಶ್ಯಕತೆಯಿಲ್ಲ.ಯಾಕೆಂದರೆ
ವಿಮರ್ಶಕರನ್ನು
ಕೊಳ್ಳುವುದು
ಸಾದ್ಯವಿದೆ.
ಬರೆಯಲು ಹೊರಟವರು ಹತ್ತು ಸಾವಿರ ಗಂಟೆ ಓದಿರಬೇಕು.ಇದು ಬರಹವನ್ನು
ಗಟ್ಟಿಗೊಳಿಸುತ್ತದೆ.ಗ್ರಹಿಕೆ
ಅನ್ನುವುದು
ಲೇಖಕನ
ಮೂಲ
ದ್ರವ್ಯ.ಪ್ರತಿಯೋಂದು
ವಿಚಾರವನ್ನು
ಸೂಕ್ಷವಾಗಿ
ಗ್ರಹಿಸುವುದು
ಅವಶ್ಯಕ.ಸೂಕ್ಷ್ಮ
ಗ್ರಹಿಕೆಯಿಲ್ಲದೇ
ಬರವಣಿಗೆ
ಅಸಾದ್ಯ.
ನಾವು ಬರೆಯುವಾಗ ನಮ್ಮ ಕ್ಷೇತ್ರ ಯಾವುದು ಎಂಬುದು ಬಹಳ ಮುಖ್ಯ.ನನಗೆ ಕವನ ಅಷ್ಟಾಗಿ
ಒದಗಿ
ಬರಲಿಲ್ಲ.ನನಗೆ ಅನಿಸಿದ್ದನ್ನು
ಗದ್ಯದಲ್ಲಿ
ಹೇಳುವಂತೆ
ಪದ್ಯದಲ್ಲಿ
ಹೇಳಲಾರೆ
ಎಂಬುದು
ಗೊತ್ತಿದೆ.ಎಲ್ಲಾ ಪ್ರಕಾರಗಳಲ್ಲೂ
ಶಕ್ತವಾಗಿ
ಬರೆಯುವವರಿದ್ದಾರೆ.ಅದು ಅವರ ಶಕ್ತಿ.
ಈಗ ಆತ್ಮಕತೆಗಳು ತುಂಬಾ ಬರುತ್ತಿವೆ.ಆತ್ಮಚರಿತ್ರೆ
ಎಂಬುದು
ದಿನಚರಿತೆಯ
ಚರಿತ್ರೆಯಾಗಬಾರದು.ಇದೂವರಗೆ
ವಾಸ್ತವತೆಯನ್ನು
ಮರೆಮಾಷಚುವ
ಕೆಲಸ
ನಡೆಯುತ್ತಿತ್ತು.ಈಗ ಸಾಮಾಜಿಕವಾಗಿ
ಪ್ರಮುಖವಲ್ಲದ
ಕಾಸಗಿ
ವಿಷಯಗಳು
ಬ್ರೇಕಿಂಗ್
ನ್ಯೂಸಿನಂತೆ
ಬಿಕರಿಯಾಗುತ್ತಿವೆ.ಇದಕ್ಕಾಗಿ
ಓದುವವರು
ತುಂಬಾ
ಚೂಸಿಯಾಗಿರಬೇಕು.
ನನಗೀಗ ನಿವೃತ್ತಿ ಬೇಕು ಅಂತಾ ಮನೆಯವರಿಗೆ ಹೇಳಿರುವೆನಾದರೂ
ಸಾಹಿತ್ಯಿಕ
ವಸ್ತುಗಳಿಗಾಗಿ,ಸಾಮಾಜಿಕ
ಕಾರ್ಯಗಳಿಗಾಗಿ
ವಕೀಲಿವೃತ್ತಿಯನ್ನು
ಮುಂದುವರೆಸುತ್ತೇನೆ.ಯಾರಾದರೂ
ಅಷ್ಡೇ
ಬರವಣಿಗೆಯ
ಅಭ್ಯಾಸದಲ್ಲಿ
ದುಡಿಮೆಯನ್ನು
ನಿರ್ಲ್ಯಕ್ಷಿಸಬಾರದು.ಸಾಹಿತ್ಯಬರವಣಿಗೆ
ನಮ್ಮ
ಪ್ರಮುಖ
ಆದಾಯ
ಮೂಲವಾಗಿ
ರೂಪುಗೊಂಡಿಲ್ಲ.ತಮ್ಮ ಬದುಕಿನ ಅವಶ್ಯಕತೆಗಾಗಿ
ಬರವಣಿಗೆಯ
ಜೊತೆಗೆ
ಪ್ರಮುಖ
ವೃತ್ತಿಯೂ
ಅಗತ್ಯವಾಗಿರಬೇಕು.
No comments:
Post a Comment